ಅಲ್ಲಮ ಟಿ.ಎಸ್. ನಾಗಾಭರಣ ನಿರ್ದೇಶನದ 2017ರ ಕನ್ನಡ ಭಾಷೆಯ ಐತಿಹಾಸಿಕ ಚಿತ್ರ. ಮುಖ್ಯ ಪಾತ್ರಗಳಲ್ಲಿ ಧನಂಜಯ್ ಮತ್ತು ಮೇಘನಾ ರಾಜ್ ನಟಿಸಿದ್ದಾರೆ. ಈ ಚಿತ್ರವು 26 ಜನವರಿ 2017 ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು. 64ನೇ‌ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ , ಈ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ (ಬಾಪು ಪದ್ಮನಾಭ) ಮತ್ತು ಅತ್ಯುತ್ತಮ ಮೇಕಪ್ (ಎನ್.ಕೆ. ರಾಮಕೃಷ್ಣ) ಗಾಗಿ ಪ್ರಶಸ್ತಿ ಲಭಿಸಿದೆ. == ಅಲ್ಲಮ == ನಿರ್ದೇಶಕ : ಟಿ. ಎಸ್. ನಾಗಾಭರಣ ಕಲಾವಿದರು: ಧನಂಜಯ, ಮೇಘನಾ ರಾಜ್, ಲಕ್ಷ್ಮೀ ಗೋಪಾಲ ಸ್ವಾಮಿ ಚಿತ್ರದ ವಿಧ: ಇತಿಹಾಸ ಕಲ್ಪನೆಯ ಚೌಕಟ್ಟಿಗೆ ಸಿಲುಕದ ಅನುಭಾವಿಯೊಬ್ಬನ ಅಂತರಂಗವನ್ನು ಸಿನಿಮಾ ರೂಪದಲ್ಲಿ ಮಾಡಯವುದೆಂದರೆ,ಆಕಾಶಕ್ಕೆ ಏಣಿ ಇಟ್ಟು ಕಾಮನಬಿಲ್ಲು ಮುಟ್ಟಿದಂತೆ. ಆದರೆ ಕೈಯಲ್ಲೋಂದು ಕನ್ನಡಿ ಹಿಡಿದು ಆ ಇಂದ್ರ ಚಾಪವನ್ನು ದಕ್ಕಿಸಿ ಕೊಳ್ಳುವ ರೀತಿಯಲ್ಲಿ ಅಲ್ಲಮನ‌ ಸಿನಿಮಾವನ್ನು ಟಿ. ಎಸ್. ನಾಗಾಭರಣ ರವರು ಮಾಡಿದಾರೆ.